ಹನುಮನ ಮತವೇ ಹರಿಯ ಮತವೋ (Hanumana Matave Hariya Matavo Lyrics)
ಹನುಮನ ಮತವೇ ಹರಿಯ ಮತವೋ
ಹನುಮನ ಮತವೇ ಹರಿಯ ಮತವೋ
ಹರಿಯ ಮತವೇ ಹನುಮನ ಮತವೋ || ಪ ||
ಹನುಮನ ನಂಬಿದ ಸುಗ್ರೀವ ಗೆದ್ದ
ಹನುಮನ ನಂಬದ ವಾಲಿಯು ಬಿದ್ದ || ೧ ||
ಹನುಮನ ನಂಬಿದ ವಿಭೀಷಣ ಗೆದ್ದ
ಹನುಮನ ನಂಬದ ರಾವಣ ಬಿದ್ದ || ೨ ||
ಹನುಮನು ಪುರಂದರ ವಿಠಲನ ದಾಸ
ಪುರಂದರವಿಠಲನು ಹನುಮನೊಳ್ವಾಸ || ೩ ||


Comments
Post a Comment